<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ರಾಯಚೂರು - ಮಂತ್ರಾಲಯ ಮಾರ್ಗ ಬಂದ್ ಸ್ಥಿತಿ : ಇರಾನ್ ಗೆ ಸ್ಟೀಲ್ ಬ್ರಿಡ್ಜ್ ಹಾನಿಯಿಂದ ಟ್ರಾಫಿಕ್ ಸಮಸ್ಯೆ

ರಾಯಚೂರು - ಮಂತ್ರಾಲಯ ಮಾರ್ಗ ಬಂದ್ ಸ್ಥಿತಿ : ಇರಾನ್ ಗೆ ಸ್ಟೀಲ್ ಬ್ರಿಡ್ಜ್ ಹಾನಿಯಿಂದ ಟ್ರಾಫಿಕ್ ಸಮಸ್ಯೆ
Summary: A steel bridge on the Raichur - Mantralaya road has broken, causing disruption to vehicular traffic. Following the incident, there has been a huge traffic jam on the road, causing inconvenience to commuters.

Belagavi News:

ತಾಲೂಕಿನ ಗಿಲ್ಲೆಸುಗೂರು ಬಳಿ ಕರ್ನಾಟಕ ಮತ್ತು ಆಂಧ್ರ ಪ್ರದೇಶ ಸಂಪರ್ಕಿಸುವ ಮಾರ್ಗದಲ್ಲಿ ನಿರ್ಮಿಸಿರುವ ತುಂಗಭದ್ರಾ ನದಿಯ ಉಕ್ಕಿನ ಸೇತುವೆಯ ಸರಳುಗಳು ತುಂಡಾಗಿವೆ. ಸೇತುವೆ ಹಾನಿಯಾದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಸೇತುವೆ ಮೂಲಕ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಸೇತುವೆಯ ಸರಳುಗಳು ಮುರಿದಿರುವುದರಿಂದ ರಾಯಚೂರು - ಮಂತ್ರಾಲಯ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಸೇತುವೆ ದುರಸ್ತಿ ಹಾಗೂ ಸಂಚಾರ ವ್ಯವಸ್ಥೆ ಸರಿಪಡಿಸುವ ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಸೇತುವೆ ಹಾನಿಯಿಂದ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡುವ ಸಾಧ್ಯತೆ ಇದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ರಾಯಚೂರು - ಮಂತ್ರಾಲಯ ಮಾರ್ಗದಲ್ಲಿ ಎರಡು ಗಂಟೆ ಟ್ರಾಫಿಕ್ ಜಾಮ್ - ಸ್ಟೀಲ್ ಬ್ರಿಡ್ಜ್ ಕಬ್ಬಿಣದ ಸರಳು ಮುರಿದು ಬಿದ್ದರೂ ತಪ್ಪಿದ ಭಾರೀ ಅನಾಹುತ :

ರಾಯಚೂರು - ಮಂತ್ರಾಲಯ ಮಾರ್ಗದ ಪ್ರಮುಖ ಸೇತುವೆಯಾಗಿರುವ ತುಂಗಭದ್ರಾ ನದಿಯ ಸ್ಟೀಲ್ ಬ್ರಿಡ್ಜ್ ನಲ್ಲಿ ಕಬ್ಬಿಣದ ಸರಳು ಏಕಾಯಕಿ ಮುರಿದುಬಿದ್ದು ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಸೇತುವೆಯ ಮೇಲ್ಭಾಗದ ಕಬ್ಬಿಣದ ಸರಳ ಕಟ್ ಆಗಿ ಬಿದ್ದಿದ್ದರಿಂದ ಈ ಮಾರ್ಗದಲ್ಲಿ ಸುಮಾರು 2 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಪರಿಣಾಮವಾಗಿ ರಾಯಚೂರು ಮತ್ತು ಮಂತ್ರಾಲಯ ಕಡೆಗೆ ತೆರಳುತ್ತಿದ್ದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಘಟನೆ ಸಂಭವಿಸಿದ ವೇಳೆ ಯಾವುದೇ ವಾಹನಕ್ಕೆ ಅಥವಾ ಪ್ರಯಾಣಿಕರಿಗೆ ಅಪಾಯವಾಗಿಲ್ಲ. ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ದುರಸ್ತಿ ಕಾರ್ಯ ಹಾಗೂ ಸಂಚಾರ ವ್ಯವಸ್ಥೆ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ರಾಯಚೂರು - ಮಂತ್ರಾಲಯ ಮಾರ್ಗದಲ್ಲಿ ಸೇತುವೆ ಸರಳು ಮುರಿತ - ಪೋಲಿಸರ ತ್ವರಿತ ಕ್ರಮದಿಂದ ಸಂಚಾರ ಪುನರಾರಂಭ :

ಗಿಲ್ಲೆಸುಗೂರು ಬಳಿ ತುಂಗ್ರಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸ್ಟೀಲ್ ಬ್ರಿಡ್ಜ್ ನ ಕಬ್ಬಿಣದ ಸರಳ ಮುರಿದು ಬಿದ್ದ ಘಟನೆ ಬಳಿಕ ಆಂಧ್ರಪ್ರದೇಶದ ಮಾದವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೇತುವೆಯ ಸ್ಥಿತಿಯನ್ನು ಪರಿಶೀಲಿಸಿ, ಕಟ್ ಆಗಿ ಬಿದ್ದಿದ್ದ ಕಬ್ಬಿಣದ ಸರಳನ್ನು ಸರಿಪಡಿಸುವ ಕಾರ್ಯ ಕೈಗೊಂಡರು. ಬೈಕ್ ವಾಹನಗಳು ಸುಸೂತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ಸೇತುವೆ ಸರಳು ಮುರಿದ ಪರಿಣಾಮ ರಾಯಚೂರು - ಮಂತ್ರಾಲಯ ಮಾರ್ಗದಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಪೊಲೀಸರತ್ವರಿತ ಕ್ರಮದಿಂದ ಇದೀಗ ಮಾರ್ಗದಲ್ಲಿ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳಿದೆ.

Stay Updated

Get the latest news delivered to your inbox

We respect your privacy. Unsubscribe anytime.


Fatal error: Uncaught mysqli_sql_exception: Operation not permitted in /home/u270720183/domains/hsrnewslive.com/public_html/admin/dbconnect.php:7 Stack trace: #0 /home/u270720183/domains/hsrnewslive.com/public_html/admin/dbconnect.php(7): mysqli->__construct() #1 /home/u270720183/domains/hsrnewslive.com/public_html/includes/trandingnews.php(2): include('/home/u27072018...') #2 /home/u270720183/domains/hsrnewslive.com/public_html/news-details.php(417): include('/home/u27072018...') #3 {main} thrown in /home/u270720183/domains/hsrnewslive.com/public_html/admin/dbconnect.php on line 7